ಮಾನೊಸಿರಸ್
ಆಕಾಶದ 88 ನಕ್ಷತ್ರಪುಂಜಗಳ ಪೈಕಿ ಒಂದು.  ಭಾರತೀಯ ಹೆಸರು ಏಕಶೃಂಗಿ.  ಮಿಥುನ ರಾಶಿಯ (ಜೆಮಿನಿ) ದಕ್ಷಿಣಕ್ಕೆ ಹಾಗೂ ಮಹಾವ್ಯಾಧ ಪುಂಜದ (ಒರೈಯನ್) ಪಶ್ಚಿಮಕ್ಕೆ ಇದೆ.  ಸನ್ನಿಹಿತ ವಿಷುವದಂಶ 22 ಗಂ.  ಘಂಟಾವೃತ್ತಾಂಶ -50. ಜಿತೇಂದ್ರಿಯತ್ವ ಇಲ್ಲವೆ ನಿರ್ದುಷ್ಟತೆಯ ಸಂಕೇತವಾಗಿರುವ, ಕುದುರೆ ಆಕಾರದ, ಒಂಟಿಕೊಂಬಿನ, ದಂತಕತೆಗಳಲ್ಲಿ ಬರುವಂಥ ಏಕಶೃಂಗಿ ಪ್ರಾಣಿಯ ನಾಮಧೇಯ ಈ ಪುಂಜಕ್ಕೆ ಇದ್ದರೂ ಇದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಪೌರಾಣಿಕ ಕತೆಗಳು ಇಲ್ಲ.  ಆಕಾಶಗಂಗೆ (ಮಿಲ್ಕಿವೇ)  ಈ ಪುಂಜದ ಅಡ್ಡ ಹಾದು ಹೋಗುತ್ತದೆ.  ಇದರ ಸಾಮಾನ್ಯ ಪ್ರದೇಶ ಬಹಳಷ್ಟು ಸಂಖ್ಯೆಯ ನಕ್ಷತ್ರಗಳಿಂದ ದಟ್ಟೆಸಿದೆ.  ನಾಲ್ಕನೆಯ ಕಾಂತಿವರ್ಗಕ್ಕೆ ಮೇಲ್ಪಟ್ಟ ಎರಡು ನಕ್ಷತ್ರಗಳಿವೆ.  ಇವುಗಳ ಪೈಕಿ ಒಂದಾದ ( ಜೋಡಿನಕ್ಷತ್ರ ಸಮ್ಮಿಶ್ರ ಕಾಂತಿವರ್ಗ.  ಈ ಪುಂಜದಲ್ಲಿ ಹಲವಾರು ಉಜ್ಜ್ವಲಕಾಂತಿಯ ನಕ್ಷತ್ರಗಳು, ಚರಕಾಂತಿಯ ನಕ್ಷತ್ರಗಳು, ತಾರಾಗುಚ್ಛಗಳೂ ನೀಹಾರಿಕೆಗಳೂ ಇವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ